Our contact numbers are currently down. Please reach us at travel@veenaworld.com or 8879973807 or 9152004513. We apologize for the inconvenience

IndiaIndia
WorldWorld
Foreign Nationals/NRIs travelling to

India+91 915 200 4511

World+91 887 997 2221

Business hours

10am - 6pm

ಏಡ್ರಿಯಾಟಿಕ್ ಮುತ್ತು!

7 mins. read

Published in the Sunday Prajavani on 04 August 2024

ನನ್ನ ಮುಂದಿದ್ದ ಜಲರಾಶಿಯನ್ನೇ ನೋಡುತ್ತಾ ಕಡಲದಂಡೆಯ ಅಮೃತಶಿಲೆಯ ಮೆಟ್ಟಿಲುಗಳ ಮೇಲೆ ನಾನು ಕೂರುತ್ತಿದ್ದಂತೆಯೇ ಸಮುದ್ರ ಹಾಡಲು ಶುರು ಮಾಡಿತು! ನಾನು ತಮಾಷೆ ಮಾಡುತ್ತಿಲ್ಲ. ಸಮುದ್ರ ನಿಜವಾಗಿಯೂ ಇಂಪಾಗಿ ಹಾಡಿತು! ಮೇಲೆ ಆಕಾಶದಲ್ಲಿ ಸೂರ್ಯ ಪ್ರಜ್ವಲಿಸುತ್ತಿದ್ದರೆ ಕೆಳಗೆ ಸಮುದ್ರದ ಅಲೆಗಳು ಅಮೃತಶಿಲೆಯ ಮೆಟ್ಟಿಲುಗಳಿಗೆ  ಮುತ್ತಿಕ್ಕುತ್ತಿದ್ದವು. ಇದರ ಜೊತೆಗೆ ಅಲ್ಲಿ ಹೊಮುತ್ತಿದ್ದ ಹಿತಕರ ಸಂಗೀತಕ್ಕೆ ನನ್ನ ಕಿವಿಗಳು ಮನಸೋತಿದ್ದವು. ಅಂದಂತೆ, ಕ್ರೊಯೇಷಿಯಾಕ್ಕೆ ಅದು ನನ್ನ ಮೊದಲ ಭೇಟಿ. ವಾಹನ ಚಾಲನೆ ಮಾಡುತ್ತಾ ಆ ದೇಶವನ್ನು ಸುತ್ತಾಡಬೇಕು ಎಂದು ನಿರ್ಧಾರ ಮಾಡಿದ್ದ ನಾನು ಜದಾರ್‌ ನಗರವನ್ನು ತಲುಪಿದ್ದೆ. ಕಾರನ್ನು ಪಾರ್ಕಿಂಗ್‌ ಮಾಡಿ ಜದಾರ್‌ ಸೀ ಆರ್ಗನ್‌ ಗೆ ತೆರಳಿದೆ. ಅದೊಂದು ಅಸಾಧಾರಣ ವಾಸ್ತುಶಿಲ್ಪ ಅದ್ಭುತವೇ ಸೈ. ಅದು ರಮಣೀಯವಾದ ಕ್ರೊಯೀಷಿಯಾದ ಏಡ್ರಿಯಾಟಿಕ್‌ ಸಮುದ್ರ ದಂಡೆಯಲ್ಲಿರುವ ಅನನ್ಯ ಸಂಗೀತ ವಾದನವೂ ಹೌದು.

ಇದು, ಜದಾರ್‌ನ ರಿವಾ ಪ್ರೊಮೆನೇಡ್‌ನ ಪಶ್ಚಿಮದ ಕೊನೆಯಲ್ಲಿದೆ. ಏಡ್ರಿಯಾಟಿಕ್‌ ಸಮುದ್ರಕ್ಕೆ ಇಳಿಯುವ ವಿಶಾಲ ಅಮೃತಶಿಲೆಯ ಮೆಟ್ಟಿಲುಗಳು ಸೀ ಆರ್ಗನ್‌ನ ಭಾಗವೇ ಆಗಿವೆ. ಈ ಮೆಟ್ಟಿಲುಗಳ ಅಡಿಭಾಗದಲ್ಲಿ ಕಣ್ಣಿಗೆ ಕಾಣದಂತಿರುವ ಟ್ಯೂಬುಗಳು ಮತ್ತು ಚೇಂಬರ್‌ಗಳ ವ್ಯವಸ್ಥೆ ಕೆಲಸ ಮಾಡುತ್ತದೆ. ಈ ವ್ಯವಸ್ಥೆ ಅಲ್ಲಲ್ಲಿ ಪುಟ್ಟ ರಂಧ್ರಗಳನ್ನು ಹೊಂದಿದ್ದು, ಈ ರಂಧ್ರಗಳ ಸರಣಿ ಮೂಲಕ ಮೇಲ್ಮೈಗೆ ಸಂಪರ್ಕಿತಗೊಂಡಿರುತ್ತದೆೆ. ಅಲೆಗಳು ಕಡಲದಂಡೆಗೆ ಬಂದು ಬಡಿದಾಗ ಸಮುದ್ರದ ನೀರು ಈ ರಂಧ್ರಗಳ ಮೂಲಕ ಚೇಂಬರ್‌ಗಳನ್ನು ತಲುಪಿ ಸ್ವರಬದ್ಧ ನಾದಗಳನ್ನು ಸೃಷ್ಟಿಸುತ್ತದೆ. ಪ್ರಕೃತಿ ಹಾಗೂ ಸೀ ಆರ್ಗನ್‌ನ ಸಾಮರಸ್ಯವು ಅಲ್ಲಿ ಇಡೀ ಕಡಲ ದಂಡೆಯನ್ನು  ಮೈಮರೆಸುವ ಗಾನದಿಂದ ಆವರಿಸುತ್ತದೆ. ಮತ್ತೊಂದು ವಿಶೇಷವೆಂದರೆ, ಇಲ್ಲಿ ಹೊರಹೊಮುವ ಸಂಗೀತದ ನಾದವು ಸಮುದ್ರದ ಅಲೆಗಳ ತೀವ್ರತೆ ಹಾಗೂ ಲಯಕ್ಕೆ ತಕ್ಕಂತೆ ಕ್ಷಣಕ್ಷಣವೂ ವಿಭಿನ್ನತೆಯಿಂದ ಕೂಡಿರುತ್ತದೆ. ಪ್ರವಾಸಿಗರಿಗೆ ಕ್ರಿಯಾತಕವೆನ್ನಿಸಿ ಅವರನ್ನು

ಪರವಶಗೊಳಿಸುವಂತಹನ  ಶ್ರವಣಾನುಭವ ಉಂಟುಮಾಡಬೇಕೆಂಬ ಧ್ಯೇಯದಿಂದ ವಾಸ್ತುಶಿಲ್ಪಿ ನಿಕೋಲ ಬಾಯ್‌ ಅವರಿಂದ ವಿನ್ಯಾಸಗೊಂಡ ಅನನ್ಯ ಸಂಗೀತ ವಾದನ ಇದಾಗಿದೆ. ಆ ಮೆಟ್ಟಿಲುಗಳ ಮೇಲೆ ಕುಳಿತು ಸಮುದ್ರದ ಅಲೆಗಳಿಂದ ಸೃಷ್ಟಿಯಾಗುವ ನಾದಕ್ಕೆ ನಾನು ಕಿವಿಯಾದ ಸಂದರ್ಭದಲ್ಲಿ ನಿಕೋಲ ಬಾಯ್‌ ಅವರಿಗೆ ಮನಸ್ಸಿನಲ್ಲೇ ಧನ್ಯವಾದ ಸಲ್ಲಿಸಿದೆ. ಜೊತೆಗೆ, ಕಲಾತ್ಮಕತೆ, ವಾಸ್ತುಶಿಲ್ಪ ಮತ್ತು ನಿಸರ್ಗವನ್ನು ಸರಿಸಾಟಿ ಇಲ್ಲದಂತೆ ಬೆಸೆದು, ನೋಡುಗರಿಗೆ ಮರೆಯಲಾಗದ ಇಂದ್ರಿಯಾನುಭವ ಉಂಟುಮಾಡುವ ಅವರ ನಾವೀನ್ಯತೆಯಿಂದ ಕೂಡಿದ ಆವಿಷ್ಕಾರಕ್ಕೆ ಬೆರಗುಗೊಂಡೆ. ಅಲ್ಲದೆ, ಸಂಗೀತದ ಆಕರ್ಷಣೆಗಿಂತ ಮಿಗಿಲಾದ ಅನುಭವವನ್ನು ಕೂಡ ಈ ಸೀ ಆರ್ಗನ್‌  ನೀಡುತ್ತದೆ; ಇದು, ಜದಾರ್‌ ನಗರವು ಸಮುದ್ರದೊಂದಿಗೆ ಹಾಗೂ ಕಡಲ ಪರಂಪರೆಯೊಂದಿಗೆ ಹೊಂದಿರುವ ಆಳವಾದ ಸಂಬಂಧವನ್ನೂ ಸಂಕೇತಿಸುತ್ತದೆ. ಇಲ್ಲಿನ ಆಹ್ಲಾದಕರ ನಾದಗಳನ್ನು ಆಲಿಸಲು ಸ್ಥಳೀಯರು ಹಾಗೂ ಪ್ರವಾಸಿಗರು ಸಮುದ್ರ ತೀರದಲ್ಲಿನ ನಡಿಗೆ ಪಥದುದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜಮಯಿಸುತ್ತಾರೆ. ಏಡ್ರಿಯಾಟಿಕ್‌ ಕಡಲಂಚಿನ ದಿಗಂತದಲ್ಲಿನ ಸೂರ್ಯಾಸ್ತಮಾನ ಕಣ್ತುಂಬಿಕೊಳ್ಳುತ್ತಾರೆ. ನಿಸರ್ಗದ ಸೌಂದರ್ಯ ಹಾಗೂ ಅದರ ಶಕ್ತಿಗೆ ಮನಸೋಲುತ್ತಾರೆ. ಜದಾರ್‌ಗೆ ಭೇಟಿಕೊಡುವ ಪ್ರವಾಸಿಗರು ದಿನದ ಯಾವುದೇ ಸಮಯದಲ್ಲಿ ಈ ಸೀ ಆರ್ಗನ್‌ ಹೊಮ್ಮಿಸುವ ನಾದವನ್ನು ಅನುಭವಿಸಬಹುದು. ಆದರೆ, ಸೂರ್ಯ ಮುಳುಗುತ್ತಾ ಪಶ್ಚಿಮದ ಅಂಚಿನಲ್ಲಿ ಕಡಲಿಗೆ ಇಳಿಯುವ ಹೊತ್ತಿನಲ್ಲಿ ಅದರ ಮಾಯೆ ಇನ್ನಷ್ಟು ವಿಶೇಷವಾಗಿರುತ್ತದೆ. ಆಕಾಶವು ಕಿತ್ತಳೆ ಹಾಗೂ ನಸುಗೆಂಪು ರಂಗುಗಳನ್ನು ಬಳಿದಂತೆ ಕಾಣುವ ಸಂದರ್ಭದಲ್ಲಿ ಸಮುದ್ರದಿಂದ ಹೊಮ್ಮುವ ನಾದವು ಪ್ರಕೃತಿಯ ವರ್ಣವೈಭವಕ್ಕೆ ಸರಿಸಾಟಿಯಾದ ಹಿಮ್ಮೇಳದಂತಿರುತ್ತದೆ!

ನನ್ನ ಕೆಲಸದ ಭಾಗವಾಗಿ ನಾನು ಆಗಾಗ ಪ್ರವಾಸ ಮಾಡುತ್ತಲೇ ಇರುತ್ತೇನೆ. ಹೀಗೆ ಬೇರೆಡೆಗಳಿಗೆ ಹೋದಾಗಲೆಲ್ಲಾ ಹೊಸ ಜಾಗಗಳಿಗಾಗಿ, ವಿಶಿಷ್ಟ ತಾಣಗಳಿಗಾಗಿ ಹಾಗೂ ಸದಾ ನೆನಪಿನಲ್ಲಿರುವಂತಹ ಅನುಭವಗಳಿಗಾಗಿ ಹುಡುಕಾಡುತ್ತಿರುತ್ತೇನೆ. ಇಂತಹ ಶೋಧನೆಗಳು “ವೀಣಾ ವರ್ಲ್ಡ್‌” ಒದಗಿಸುವ ಪ್ರವಾಸ ವ್ಯವಸ್ಥೆಗಳು ಮತ್ತು ರಜೆ ದಿನಗಳ ಭಾಗವಾಗಿರುತ್ತವೆ ಎಂದು ಇಲ್ಲಿ ಹೇಳಬಯಸುತ್ತೇನೆ. ಇವು ಪ್ರವಾಸದ ಸಮೃದ್ಧ ಅನುಭವಗಳನ್ನು “ವೀಣಾ ವರ್ಲ್ಡ್‌”ನ ಎಲ್ಲಾ ಅತಿಥಿಗಳು ತಮ್ಮದಾಗಿಸಿಕೊಳ್ಳುವುದನ್ನು ಖಾತರಿಗೊಳಿಸುತ್ತವೆ. ಕ್ರೊಯೇಷಿಯಾಕ್ಕೆ ನಾನು ಇತ್ತೀಚೆಗೆ ನೀಡಿದ್ದ ಭೇಟಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇತಿಹಾಸ, ಪ್ರಕೃತಿ ಸೌಂದರ್ಯ ಹಾಗೂ ಅನಿರೀಕ್ಷಿತ ಮುದಗಳಿಂದ ಕೂಡಿದ ಪ್ರವಾಸ ಇದಾಗಿತ್ತು.

ನಾನು ನನ್ನ ಪ್ರವಾಸದ ಸಾಕಷ್ಟು ಸಮಯವನ್ನು ಜದಾರ್‌ನಲ್ಲಿ ಅಲ್ಲಿನ ವಾಸ್ತುಶಿಲ್ಪ ಮತ್ತು ಪ್ರಾಚೀನ ಅವಶೇಷಗಳನ್ನು ವಿಸಯದೊಂದಿಗೆ ವೀಕ್ಷಿಸುತ್ತಾ ಕಳೆದೆ. ಜಡೇರಾ ಎಂಬ  ಪುರಾತನ ರೋಮನ್‌ ವಸಾಹತುವು, ಆಧುನಿಕ ಕಾಲದಲ್ಲಿ ಜದಾರ್‌ ಎಂದು ಹೆಸರಾಗಿ ಏಡ್ರಿಯಾಟಿಕ್‌ ಸಾಗರ ಪ್ರದೇಶದ ಪ್ರಮುಖ ವಹಿವಾಟು ನೆಲೆಯಾಗಿ ಪ್ರವರ್ಧಮಾನಕ್ಕೆ ಬಂದಿದೆ. ಈ ನಗರದ ರೋಮನ್‌ ಕುರುಹುಗಳನ್ನು  ಅಲ್ಲಿ ಜತನದಿಂದ ಸಂರಕ್ಷಿಸಲಾಗಿರುವ ಪೋರಂ ಹಾಗೂ ಭವ್ಯ ಗೋಡೆಗಳಲ್ಲಿ ಕಾಣಬಹುದಾಗಿದೆ. ತದನಂತರ, ಜದಾರ್‌ 15ನೇ ಶತಮಾನದಲ್ಲಿ ವೆನೀಷಿಯನ್‌ ಆಳ್ವಿಕೆಗೆ ಒಳಪಟ್ಟು, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಗೆ ತನ್ನ ಕೊಡುಗೆ ಮುಂದುವರಿಸಿತು. ಜದಾರ್‌ನಿಂದ ಮುಂದೆ ನಾನು ಪ್ಲಿಟ್‌ವಿಸ್‌‍ ಲೇಕ್‌್ಸ ನ್ಯಾಷನಲ್‌ ಪಾರ್ಕ್‌ಗೆ ಪಯಣ ಬೆಳೆಸಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಇದು ಸರಣಿ ಜಲಪಾತಗಳು ಹಾಗೂ ಪಚ್ಚೆ ಹಸಿರಿನ ಸರೋವರಗಳಿಗೆ ಹೆಸರಾದ ಸ್ಥಳವಾಗಿದೆ.

ಪ್ಲಿಟ್‌ವಿಸ್‌‍ ನ್ಯಾಷನಲ್‌ ಪಾರ್ಕ್‌ನ ಸೊಬಗಿನ ಬಗ್ಗೆ ನಾನು ಮುಂಚೆಯೇ ಕೇಳಿ ತಿಳಿದಿದ್ದೆ ಎಂಬುದೇನೊ ಸರಿಯೇ. ಆದರೆ, ಅದನ್ನು ಕಣ್ಣಾರೆ ನೋಡಿದಾಗ ಆದ ಆನಂದವನ್ನು ಮಾತುಗಳಲ್ಲಿ ಹೇಳುವುದು ಕಷ್ಟಸಾಧ್ಯ! ಒಂದರ ಮೇಲೊಂದರಂತೆ ಸ್ತರೋಪಾದಿಯಲ್ಲಿ 16 ಸರೋವರಗಳು, ಇವುಗಳನ್ನು ಪರಸ್ಪರ ಜೋಡಿಸುವ ಜಲಪಾತಗಳು, ಸುಣ್ಣದ ಕಲ್ಲಿನ ಆಳಕಣಿವೆಗಳಿಂದ ಕೂಡಿದ 295 ಚದರ ಕಿಲೋಮೀಟರ್‌ನಲ್ಲಿ ಹರಡಿಕೊಂಡಿರುವ ಮೀಸಲು ಅರಣ್ಯ, ಇವುಗಳನ್ನು ಒಮ್ಮೆ ಕಣ್ಮುಂದೆ ತಂದುಕೊಂಡರೆ ನಂದನದ ತುಣುಕಿನಂತಹ ಪ್ಲಿಟ್‌ವಿಸ್‌‍ ನ್ಯಾಷನಲ್‌ ಪಾರ್ಕ್‌ನ ಸೌಂದರ್ಯಾತಿಶಯ ನಿಮಗೆ ಒಂದಿಷ್ಟು ನಿಲುಕಬಹುದೇನೋ!

ಈ ಉದ್ಯಾನದಲ್ಲಿ ಮರದ ಹಲಗೆ ಹಾಸುಗಳ ಮೇಲೆ ಉದ್ದಕ್ಕೂ ನಡೆಯುತ್ತಾ ಹೋದಂತೆ ಸ್ವರ್ಗದಂತಿರುವ ಅಲ್ಲಿನ ಪ್ರಕೃತಿಯ ಅಪ್ಪಟ ಸೊಬಗಿಗೆ ನಾನು ಬೆರಗಾಗಿ ಹೋದೆ. ಅಲ್ಲಿನ ಒಂದೊಂದು ದಿಕ್ಕಿನ ಸೌಂದರ್ಯವೂ ಹಿಂದಿನ ಕ್ಷಣದ ಮನಸೂರೆಗೊಳ್ಳುವ ನೋಟದ ರಮ್ಯತೆಯನ್ನು  ಮೀರಿಸುವಂತಿದೆ. ಇಲ್ಲಿನ ವಾಕ್‌ ವೇಗಳು ಹಾಗೂ ಕಾಲುದಾರಿಗಳು ನೀರಿನ ಸುತ್ತ ಬಳಸಿ ಸಾಗುತ್ತವೆ. ಮೇಲುಸ್ತರದಲ್ಲಿರುವ 12 ಸರೋವರಗಳು ಮತ್ತು ಕೆಳಸ್ತರದಲ್ಲಿರುವ  4 ಸರೋವರಗಳನ್ನು ಎಲೆಕ್ಟ್ರಿಕ್‌ ದೋಣಿಯು ಸಂಪರ್ಕಿಸುತ್ತದೆ. ಕೆಳಸ್ತರದ  4 ಸರೋವರಗಳು 78 ಮೀಟರ್‌ ಎತ್ತರದಿಂದ  ಧುಮಿಕ್ಕಿ  ವೆಲಿಕಿ ಸ್ಲ್ಯಾಪ್‌ ಎಂಬ ಜಲಪಾತ ರೂಪಿಸುತ್ತವೆ. ಇಲ್ಲಿಗೆ ಬಂದ ಮೇಲೆ, ಈ ಜಾಗಕ್ಕೆ ಇನ್ನೂ ಮುಂಚೆಯೇ ಬಂದು ಇನ್ನಷ್ಟು ಸಮಯ ಕಳೆಯಬೇಕಿತ್ತು ಎಂಬ ವಿಷಾದ ನನ್ನನ್ನು ಮುತ್ತಿಕೊಂಡಿದ್ದು ಸುಳ್ಳಲ್ಲ. ಆದರೆ, ಏನು ಮಾಡುವುದು, ಒಂದೇ ಬದುಕಿನಲ್ಲಿ ಎಲ್ಲವೂ ಸಿಗಲು ಸಾಧ್ಯವೇ?

ಏನನ್ನಾದರೂ ಹೊಸತನ್ನು ಹಾಗೂ ತನ್ನದೇ ಹೆಗ್ಗುರುತಿನಿಂದ ಕೂಡಿರುವ ವಿಶಿಷ್ಟವಾದುದನ್ನು ಅನ್ವೇಷಿಸಬೇಕು ಎಂಬ ತುಡಿತದಿಂದ ನಾನು ಕ್ರೊಯೇಷಿಯಾಗೆ ಭೇಟಿ ನೀಡಲು ನಿರ್ಧರಿಸಿದ್ದೆ. ನಾನು ಅಲ್ಲಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕ್ರೊಯೇಷಿಯಾ ದೇಶವು ಭಾರತದ ಪ್ರವಾಸಿಗರಲ್ಲಿ ಅಷ್ಟೇನೂ ಜನಪ್ರಿಯವಾಗಿರಲಿಲ್ಲ.  ಅಲ್ಲಿನ ಸೊಬಗಿನಿಂದ ಆಕರ್ಷಿತನಾದ ನಾನು ಬಹಳ ಸಮಯದ ನಂತರ ನನ್ನ ಸುತ್ತಾಟದ ಹಂಬಲವನ್ನು ನಿಜವಾಗಿಯೂ ಸಂತೃಪ್ತಗೊಳಿಸುವಂತಹ  ದೇಶವೊಂದನ್ನು ಕಂಡುಕೊಂಡಿದ್ದೆ. ಆ ದೇಶದ ರಾಜಧಾನಿ  ಡುಬ್ರೋವ್‌ನಿಕ್‌  ನಗರದಲ್ಲಿ ಬಾಡಿಗೆ ಕಾರು ಪಡೆದು ಸುತ್ತಾಟ ಶುರು ಮಾಡಿದಾಗ ಅಲ್ಲಿಯ ಎಡಬದಿಯ ಡ್ರೈವಿಂಗ್‌ ನಿಯಮ ನನಗೆ ಸ್ವಲ್ಪ ಆತಂಕ ಉಂಟು ಮಾಡಿತ್ತು. ಆದರೆ, ನಾನು ಅದಕ್ಕೆ ಬೇಗನೆ ಹೊಂದಿಕೊಂಡು ಅಲ್ಲಿನ ರಸ್ತೆಗಳಲ್ಲಿ ಸರಾಗವಾಗಿ ಚಾಲನೆ ಮಾಡತೊಡಗಿದೆ. ಈ ಮಧ್ಯೆ ಅಚಾನಕ್ಕಾಗಿ ಕೆಲವು ಸಾಹಸದ ಅನುಭವಗಳೂ ನನಗಾದವು. ಒಂದು ಸಲ ನಾನು ಗೂಗಲ್‌ ಮ್ಯಾಪ್‌ ಅನುಸರಿಸುತ್ತಾ ಡ್ರೈವಿಂಗ್‌ ಮಾಡಿಕೊಂಡು ರಸ್ತೆಯೊಂದರ ಕೊನೆ ತಲುಪಿದೆ. ಆದರೆ ಮುಂದೆ ನೋಡಿದರೆ ರಸ್ತೆ ಅಲ್ಲಿಗೇ ಮುಕ್ತಾಯ! ಅಲ್ಲಿಂದ ಮುಂದಕ್ಕೆ ೆರಿಯಲ್ಲಿ ಹೋಗಬೇಕು. ನನ್ನ ಕಾರಿನ ಸಮೇತ ೆರಿಯೊಳಕ್ಕೆ ಧಾವಿಸಿ ಅದರಲ್ಲಿ ಪಯಣಿಸಿ ನಿಗದಿತ ಸ್ಥಳ ತಲುಪಿದೆ. ಕ್ರೊಯೇಷಿಯಾ ಜನಜೀವನದ ಮಟ್ಟಿಗೆ ಹೇಳುವುದಾದರೆ ಅಲ್ಲಿನ ಅಪಾರ ಜಲರಾಶಿಯು ವಹಿಸುವ ಪಾತ್ರ ಪ್ರಧಾನವಾದುದು. ಸ್ಪಟಿಕದಂತಹ ಅಲ್ಲಿನ ನೀರಿನ ಪರಿಶುದ್ಧತೆಯು ಕ್ರೊಯೇಷಿಯನ್ನರಿಗೆ ತಮಗೆ ಯಾವಾಗ ಬೇಕೋ ಆಗ ಬೇಕೆನೆಸಿದ ಜಾಗದಲ್ಲಿ ಈಜಾಡುವ ಅವಕಾಶ ಕಲ್ಪಿಸುತ್ತದೆ. ನಾವು ಕೂಡ ನಮ್ಮ ಕಾರನ್ನು ನಿಲ್ಲಿಸಿ ಸಾರ್ವಜನಿಕ ಕಡಲ ತೀರದಲ್ಲಿ ಇಳಿದು ಸಮುದ್ರದ ಪರಿಶುಭ್ರ ನೀರಿನಲ್ಲಿ ಸ್ವಚ್ಛಂದವಾಗಿ ಈಜಾಡಿ ಖುಷಿಪಟ್ಟೆವು.

ಕ್ರೊಯೇಷಿಯಾ ರಾಜಧಾನಿ ನಗರವಾದ ಡುಬ್ರೋವ್‌ನಿಕ್‌   ಪರ್ಲ್‌ ಆಪ್‌ ದಿ ಏಡಿಯಾಟ್ರಿಕ್‌ (ಏಡ್ರಿಯಾಟಿಕ್‌ ಮುತ್ತು) ಎಂದೂ ಕರೆಯಲಾಗುತ್ತದೆ. ಮಧ್ಯಕಾಲೀನ ಯುಗದ ಗೋಡೆಗಳಿಂದ ಸುತ್ತುವರಿದಿರುವ ಹಾಗೂ ಏಡ್ರಿಯಾಟಿಕ್‌ ಸಾಗರದ ಹೊಳೆಯುವ ನೀರಿಗೆ ಮುಖಮಾಡಿ ನಿಂತಿರುವ ಡುಬ್ರೋವ್‌ನಿಕ್‌  ಚಿರಂತನ ಸೊಬಗನ್ನು ಹೊರಸೂಸುವ ನಗರವಾಗಿದೆ. ಅಲ್ಲಿನ ಓಲ್‌್ಡ ಟೌನ್‌ ನಲ್ಲಿನ  ಚಕ್ರವ್ಯೂಹ

ನೆನಪಿಸುವ ಬಳಸು ರಸ್ತೆಗಳಲ್ಲಿ ನಾನು ಅಡ್ಡಾಡಿದಾಗ ರಾಜರು ಮತ್ತು ವರ್ತಕರ ಹಿಂದಿನ ಯುಗಮಾನಕ್ಕೆ ಸಂಚರಿಸಿದ ಅನುಭವವಾಯಿತು. ಪೋರ್ಟ್‌ ಲೊವ್ರಿಜೆನಿಕ್‌ನ ಭ ಗೋಡೆಗಳಿಂದ ಹಿಡಿದು ಸೇಂಟ್‌ ಬ್ಲೈಸೆಯ ಚರ್ಚಿನ ಬರೋಕ್‌ ವೈಭವದವರೆಗೆ ಡುಬ್ರೋವ್‌ನಿಕ್‌ನ ಪ್ರತಿಯೊಂದು ಮೂಲೆಯೂ ತನ್ನ ಹಿಂದಿನ ಕಥಾರಹಸ್ಯಗಳನ್ನು ಪಿಸುಗುಟ್ಟಿದ್ದಂತೆ ಭಾಸವಾಗುತ್ತಿತ್ತು. ನಾನು ಡುಬ್ರೋವ್‌ನಿಕ್‌ನಲ್ಲಿ ಚಿತ್ರೀಕರಣಗೊಂಡ ಎಚ್‌ಬಿಒ ಸರಣಿಯ   ಗೇಮ್‌ ಆಥ್‌ ಥ್ರೋನ್‌್ಸ  ರಣಿ ನೋಡುವುದನ್ನು ಆರಂಭಿಸುವುದಕ್ಕೆ ಬಹಳ ಮುಂಚೆಯೇ ಆ ನಗರಕ್ಕೆ ಭೇಟಿ ಕೊಟ್ಟಿದ್ದೆ. ಡುಬ್ರೋವ್‌ನಿಕ್‌ ಅನ್ನು ಟಿ.ವಿ.ಯಲ್ಲಿ ಬಿಂಬಿಸಿದಂತೆ ಕೇವಲ ರಾಜರ ನೆಲೆವೀಡು ಎಂಬುದಕ್ಕೆ ಹೊರತಾಗಿ ಅಲ್ಲಿನ ನೈಜ ಚಹರೆಗಳೊಂದಿಗೆ ನೋಡಿದ್ದಕ್ಕೆ ನನಗೆ ಸಂತೋಷವಾಗುತ್ತಿದೆ. ಕೆಲವೊಮೆಯಾವುದೇ ಸ್ಥಳವೊಂದನ್ನು ಪರದೆಯ ಮೇಲೆ ಬಿಂಬಿತವಾಗುವುದಕ್ಕಿಂತ ವಿಭಿನ್ನ ರೀತಿಯಲ್ಲಿ ಅನುಭವಿಸುವುದು ಉತ್ತಮ ಎಂಬುದನ್ನು ನೀವು ಸಹ ಒಪ್ಪುತ್ತೀರಾ ಅಲ್ಲವೇ?

ಕ್ರೋಯೋಷಿಯಾದಲ್ಲಿ ಯಾನ ಮುಂದುವರಿಸಿದ ನಾನು ಐತಿಹಾಸಿಕ ನಗರ ಸ್ಪ್ಲಿಟ್‌ಗೆ ತೆರಳಿದೆ. ಇದು ಪ್ರಾಚೀನ ಅವಶೇಷಗಳು ಆಧುನಿಕ ಬದುಕಿನೊಂದಿಗೆ ಮೇಳೈಸಿಕೊಂಡಿರುವ ನಗರ. ರೋಮನ್‌ ಚಕ್ರವರ್ತಿಯಿಂದ 4ನೇ ಶತಮಾನದಲ್ಲಿ ನಿರ್ಮಿತವಾದ ಡಿಯೋಕ್ಲೆಷಿಯನ್‌ ಅರಮನೆಯ ಮೊಗಸಾಲೆಗಳಲ್ಲಿ ಅಡ್ಡಾಡುವಾಗ ಹಿಂದಿನ ಶತಮಾನಗಳ ಶಬ್ದ ತರಂಗಗಳು ಪ್ರತಿಧ್ವನಿಸಿದಂತಾದವು. ಹತ್ತಿರದಲ್ಲೇ ಇರುವ ಆಕರ್ಷಕ ಹ್ವಾರ್‌ ದ್ವೀಪದ ಪಸೆಯಿಂದ ಕೂಡಿದ ಕಡಲ ದಂಡೆಗಳು ಮತ್ತು ರಮಣೀಯ ದ್ರಾಕ್ಷಿ ತೋಟಗಳು ಕ್ರೊಯೇಷಿಯಾದ ಸಮೃದ್ಧ ಕಡಲನಂಟಿನ ಪರಂಪರೆಗೆ ಕಿಟಕಿಗಳಂತೆ ಗೋಚರಿಸಿದವು.

ಕ್ರೊಯೇಷಿಯಾದಲ್ಲಿನ  ಪ್ರಯಾಣದುದ್ದಕ್ಕೂ ನೆರೆಯ ನಾಗರಿಕತೆಗಳ ಪ್ರಭಾವದಿಂದ ರೂಪುಗೊಂಡ ಅಲ್ಲಿನ ಸಮೃದ್ಧ ಚರಿತ್ರೆ ಹಾಗೂ ಸಾಂಸ್ಕೃತಿಕ ಪರಂಪರೆಯಿಂದ ನಾನು ವಿಸಿತನಾದೆ. ಜದಾರ್‌ನಲ್ಲಿನ ವೆನೇಷಿಯನ್‌ ವಾಸ್ತುಶಿಲ್ಪದಿಂದ ಹಿಡಿದು ಸ್ಪಿಟ್‌ನಲ್ಲಿ ಕಂಡುಬರುವ ದಂತಕತೆಯೆಂದೇ ಹೆಸರಾಗಿರುವ ವರ್ತಕ ಅನ್ವೇಷಕ ಮಾರ್ಕೋ ಪೋಲೋ ಪರಂಪರೆಯವರೆಗೆ ಕ್ರೊಯೇಷಿಯಾದ ಇತಿಹಾಸವು ವರ್ತಮಾನದೊಂದಿಗೆ ಹೆಣೆದುಕೊಂಡಿರುವ ಪರಿ ಅನನ್ಯ. ಕ್ರೊಯೇಷಿಯಾದ ಅತ್ಯಂತ ಹಳೆಯ ಐಸ್‌‍ ಕ್ರೀಮ್‌ ಪಾರ್ಲರ್‌ ಸ್ಲ್ಯಾಡೊಲೆಡರ್ನ ಡೊನಾಟ್‌ ದಲ್ಲಿ ಗೆಲೆಟೊ ಸ್ಕೂಪ್‌ ಮೆಲ್ಲುವಾಗ ಮಂತ್ರಮುಗ್ಧಗೊಳಿಸುವ ಈ ನಾಡಿನ ಸಮಯಾತೀತ ಸೆಳೆತದ ಗುಂಗಿಗೆ ನನಗರಿವಿಲ್ಲದಂತೆಯೇ ನಾನು ಜಾರಿಬಿಟ್ಟಿದ್ದೆ!

ಇಂತಹ ಮಧುರ ನೆನಪುಗಳನ್ನು ಒಳಗೊಂಡ ಕ್ರೊಯೇಷಿಯಾದ ನನ್ನ ಪ್ರಯಾಣವು ಬರಿಯ ಸುತ್ತಾಟವಾಗಿರಲಿಲ್ಲ; ಅದು ನನ್ನ ಹೃದಯವನ್ನು ಹಲವಾರು ರೀತಿಗಳಲ್ಲಿ  ಸಮ್ಮೋಹನಗೊಳಿಸಿದ ಪರಿವರ್ತಕ ಅನುಭವವಾಗಿತ್ತು. ಈ ಮನಮೋಹಕ ದೇಶದಿಂದ ವಾಪಸ್‌‍  ಹೊರಟಾಗ ಜದಾರ್‌ನಿಂದ ಪ್ಲಿಟ್‌ವಿಸ್‌‍, ಅಲ್ಲಿಂದ ಡುಬ್ರೋವ್‌ನಿಕ್‌  ಹೀಗೆ ಸಾಗಿದ್ದ ನನ್ನ ಯಾನದ  ವಿಶಿಷ್ಟ ನೆನಪುಗಳು ಈ ಎದೆಯಾಳದಲ್ಲಿ ಯಾವತ್ತಿಗೂ ರಿಂಗಣಿಸುತ್ತಲೇ ಇರುತ್ತವೆ ಎಂಬುದು ನನಗೆ ಖಾತರಿಯಾಗಿತ್ತು!

ಪ್ರತಿವಾರವೂ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುನಿಲಾ ಪಾಟೀಲ್, ವೀಣಾ ಪಾಟೀಲ್ ಮತ್ತು ನೀಲ್ ಪಾಟೀಲ್ ಅವರ ಲೇಖನಗಳನ್ನು ವೀಣಾ ವರ್ಲ್ಡ್ ವೆಬ್ಸೈಟ್ www.veenaworld.comನಲ್ಲೂ ಓದಬಹುದು.

August 03, 2024

Author

Sunila Patil
Sunila Patil

Sunila Patil, the founder and Chief Product Officer at Veena World, holds a master's degree in physiotherapy. She proudly served as India's first and only Aussie Specialist Ambassador, bringing her extensive expertise to the realm of travel. With a remarkable journey, she has explored all seven continents, including Antarctica, spanning over 80 countries. Here's sharing the best moments from her extensive travels. Through her insightful writing, she gives readers a fascinating look into her experiences.

More Blogs by Sunila Patil

Post your Comment

Please let us know your thoughts on this story by leaving a comment.

Looking for something?

Embark on an incredible journey with Veena World as we discover and share our extraordinary experiences.

Balloon
Arrow
Arrow

Request Call Back

Tell us a little about yourself and we will get back to you

+91

Our Offices

Coming Soon

Located across the country, ready to assist in planning & booking your perfect vacation.

Locate nearest Veena World

Listen to our Travel Stories

Veena World tour reviews

What are you waiting for? Chalo Bag Bharo Nikal Pado!

Scroll to Top